ರಂಗವಲ್ಲಿ ರಂಗಸಂಭ್ರಮ 2023
9-13 | ಆಗಸ್ಟ್ | 2023
ಕಿರುರಂಗಮಂದಿರ, ಕಲಾಮಂದಿರ ಆವರಣ, ಮೈಸೂರು
ಸಹಕಾರ: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.
ಹಿರಿಯ ರಂಗಕರ್ಮಿ ಶ್ರೀ ಮೈಮ್ ರಮೇಶ್ ಅವರು ದೀಪ ಬೆಳಗಿಸುವುದರ ಮೂಲಕ ರ೦ಗವಲ್ಲಿ ರಂಗಸ೦ಭ್ರಮ-2023 ಐದು ದಿನಗಳ ರಾಜ್ಯಮಟ್ಟದ ನಾಟಕೋತ್ಸವಕ್ಕೆ ಚಾಲನೆ ನೀಡಿದರು. ಜೆ.ಎನ್.ಯು ನಿವೃತ್ತ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ಜ೦ಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣದ ಉಪ ನಿರ್ದೇಶಕರಾದ ನಿರ್ಮಲ ಮಠಪತಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್, ರಂಗವಲ್ಲಿ ತಂಡದ ಅಧ್ಯಕ್ಷ ವಿಶ್ವಾಸ್ ಕೃಷ್ಣ, ಕಾರ್ಯದರ್ಶಿ ಬಿ.ರಾಜೇಶ್, ಖಜಾ೦ಚಿ ಮ೦ಜುನಾಥಶಾಸ್ತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ಛಾಯಾಗ್ರಾಹಕ ನೇತ್ರರಾಜು ಹೆಸರಿನಲ್ಲಿ ವೇದಿಕೆ ನಿರ್ಮಿಸಲಾಗಿತ್ತು. ನ೦ತರ ವಿದುಷಿವಾಸವಿ ಮತ್ತುವಿದುಷಿ ಹರಿಣಾಕ್ಷಿ ನಡೆಸಿಕೊಟ್ಟ ಸುಗಮಸ೦ಗೀತ ಜನಮನ್ಮಣೆಗಳಿಸಿತು.
