ಪರಮೇಶಿ ಪ್ರೇಮ ಪ್ರಸಂಗ (2025)
ರಚನೆ: ಶ್ರೀನಿವಾಸ ಪ್ರಭು
ನಿರ್ದೇಶನ: ರವಿಪ್ರಸಾದ್
Parameshi Prema Prasanga (2025)
Playwright: K.V. Srinivasa Prabhu
Directed by: Raviprasad H.R.
ನಾಟಕ ಕುರಿತು:
ಇಂಗ್ಲಿಷ್ ಲೇಖಕ, ವುಡ್ ಹೌಸ್ ಕೃತಿಯಿಂದ ಪ್ರೇರೇಪಿತವಾದ, ಶ್ರೀನಿವಾಸ ಪ್ರಭು ಅವರ ರಚನೆಯ ಈ ನಾಟಕವು – ಪ್ರೇಮಪಾಶದಲ್ಲಿ ಸಿಕ್ಕಿಕೊಂಡು ವಿಲವಿಲನೆ ಒದ್ದಾಡುತ್ತಿರುವ ಪರಮೇಶಿ ಮತ್ತು ಕೃಷ್ಣೋಜಿ ಎಂಬ ಗೆಳೆಯರು ಅನುಭವಿಸುವ ನಾನಾ ಬಗೆಯ ಪೇಚುಗಳನ್ನು ಈ ಪ್ರಹಸನ ತಿಳಿಹಾಸ್ಯದ ಪಾತಳಿಯಲ್ಲಿ ಬಿಚ್ಚಿಡುತ್ತದೆ. ರಶ್ಮಿಯನ್ನು ಒಲಿಸಿಕೊಳ್ಳಲು ಪರದಾಡುವ ಪರಮೇಶಿ.. ಕೃಷ್ಣೋಜಿಯ ಬ್ರಹ್ಮಚರ್ಯಕ್ಕೆ ಸವಾಲೆಸೆಯುವ ಶಾಂತಲಾದೇವಿಯ ಕಣ್ಣುಗಳು.. ಕವಿಯಾಗಲೇ ಬೇಕು ಎಂದು ಹಠ ತೊಟ್ಟಿರುವ ವ್ಯಾಕುಲರಾಯ.. ಗಂಡನನ್ನು ಹುರಿದು ಮುಕ್ಕುವ ಅಂಬಾಬಾಯಿ.. ತನ್ನ ಹೆಸರೇ ನೆನಪಿಲ್ಲದ ಭೂತನಾಥ.. ತಿಂಡಿ ಪೋತ ದೇಸಾಯಿ.. ಒಳ್ಳೆಯವನಾಗಿರುವ ಮಾಜಿ ದರೋಡೆಕೋರ.. ಕಣ್ಣು ಮಿಟುಕಿಸುವುದರೊಳಗೆ ನೆಕ್ಲೆಸ್ ಎಗರಿಸುವ ಚೆನ್ನಿ.. ಇವಿಷ್ಟೂ ಪಾತ್ರಗಳು ಒಂದು ಕಡೆ ಸೇರಿದರೆ ಉಕ್ಕುವ ನಗೆ ಬುಗ್ಗೆಯೇ ‘ಪರಮೇಶಿ ಪ್ರೇಮ ಪ್ರಸಂಗ’
ನೇಪಥ್ಯದಲ್ಲಿ
ರಂಗವಿನ್ಯಾಸ: ಹೆಚ್.ಕೆ.ದ್ವಾರಕಾನಾಥ್ । ಬೆಳಕಿನ ವಿನ್ಯಾಸ: ಮಧು ನೀನಾಸಂ । ವಸ್ತ್ರವಿನ್ಯಾಸ: ಹರಿಪ್ರಸಾದ್ । ಪ್ರಸಾದನ: ಸರಿತಾ ಸಿ.ವಿ. । ಸಂಗೀತ ನಿರ್ವಹಣೆ: ಮಂಜು ಮಂಗಲ
ರಂಗದ ಮೇಲೆ
ಮಂಜು ವಿ.ನರಸಾಪುರ, ಮುರಳಿ ಗುಂಡಣ್ಣ, ರವಿಪ್ರಸಾದ್, ಪಾವನ ಧನರಾಜ್, ಶ್ರುತಿ ಆರ್. ಎಂ., ಪ್ರವಲ್ಲಿಕ, ನವ್ಯ ಉಪಾಧ್ಯಾಯ, ಭಾರ್ಗವಿ ಕಶ್ಯಪ್, ರೂಪ, ಸುಧೀರ್, ಬಸವರಾಜ, ಗುರುರಾಜ, ರಾಜೇಶ್ ಬಿ.ಆರ್.
ಮೊದಲ ಪ್ರದರ್ಶನ: ಫೆಬ್ರವರಿ 12 ಮತ್ತು 13, 2025 | ಸ್ಥಳ: ಕಿರುರಂಗಮಂದಿರ, ಕಲಾಮಂದಿರ ಆವರಣ, ಮೈಸೂರು
Play Synopsis
Inspired by the works of English writer P.G. Wodehouse, this romantic comedy is penned by Srinivasa Prabhu. Parameshi, who’s striving tooth and nail to woo Rashmi… Krishnoji, whose celibacy is being fiercely challenged by the eyes of Shantaladevi… Vyakularaya, who’s adamant about becoming a poet, come hell or high water… Ambabayi, who roasts and devours her husband (metaphorically, we hope!)… Bhoothanatha, who can’t even recall his own name… Desai, the gluttonous foodie… Pundriklu ,the former dacoit turned good guy… And Chenni, who swipes a necklace in the blink of an eye…
When all these characters assemble in one place, the resulting fountain of uncontrollable laughter is none other than ‘Parameshi Prema Prasanga’ (Parameshi’s Love Affair)!
Backstage:
Set Design: HK Dwarakanath | Costumes: Hariprasad | Props: Pravalika | Lights: Madhu Ninasam
MakeUp: Saritha C.V./ Raghavendra Boodnoor | Music operation: Manju Mangala
On Stage:
Manju V. Narasapura, Murali Gundanna, Raviprasad, Pavana Dhanaraj, Shruthi R.M. Pravalika, Navya Upadhyaya, Roopa, Sudheer, Basavaraja, Gururaj, Rajesh B.R.
Staged on: February 12 & 13, 2025 Venue: Kiru Rangamandira, Mysore.