ಮಿಥುನ್ ನಂಬರ್ ಟೂ (2015)

ಕಥೆ : ಜಯಂತ್‍ ಕಾಯ್ಕಿಣಿ
ಪರಿಕಲ್ಪನೆ, ನಿರ್ದೇಶನ : ಮಹೇಶ್‍ ನಂಜುಂಡಯ್ಯ

MITHUN NUMBER TWO (2015)

Story : Jayanth Kaikini
Direction : Mahesh Kumar Nanjundaiah

ನಾಟಕ ಕುರಿತು:
ಯಾರಾದರೂ ಪ್ರಾಯದ ಹುಡುಗರಿಗೆ ‘ಲೇ ನೀನು ನೋಡೋಕೆ ಹೀರೋ ಥರಾನೆ ಇದ್ದೀಯಾ’ ಅಂದು ಬಿಡಿ. ತಟ್ಟನೆ ಅವರ ಕಣ್ಣು ಆಕಾಶದ ಕಡೆ ಹೊರಳಿ ಬಿಡುತ್ತೆ, ಕನ್ನಡಿಯಲ್ಲಿ ಐವತ್ತು ಸಲ ಮುಖ ನೋಡ್ಕೋತಾರೆ. ತಮ್ಮ ನೆಚ್ಚಿನ ನಟನ ಅನುಕರಣೆ ಮಾಡಲು ಆರಂಭಿಸುತ್ತಾರೆ. ಭಾವ-ಭಂಗಿ ಪ್ರದರ್ಶನವಾಗುತ್ತದೆ. ನೆಚ್ಚಿನ ನಟಿಯರು ತೋಳ ತೆಕ್ಕೆಯಲ್ಲಿರುವಂತೆಯೇ ತೇಲುತ್ತಿರುತ್ತಾರೆ.

ಈ ಕಥಾ ನಾಯಕ ಚಂದು ಇದಾನಲ್ಲ. ಯಾವಾಗಲೋ ಈತನ ತಲೆಗೆ ಪೆಟ್ಟು ಬಿದ್ದು, ಹಣೆಗೆ ಪಟ್ಟಿಕಟ್ಟಿಕೊಂಡಿದ್ದನ್ನು ನೋಡಿದ ಯಾರೋ ಇವನನ್ನ ಮಿಥುನ್ ಚಕ್ರವರ್ತಿ ಎಂದುಬಿಟ್ಟರಂತೆ. ಆಗ ಶುರುವಾಯ್ತು ನೋಡಿ. ಚಂದು ಒಳಗೊಬ್ಬ ಹೀರೋ ಹುಟ್ಟಿಕೊಂಡ. ಮಿಥುನ್ ಚಕ್ರವರ್ತಿಯಂತೆಯೇ ಹೇರ್ ಕಟಿಂಗ್, ಪ್ಯಾಂಟು, ಬೂಟು, ನಡಿಗೆ ಎಲ್ಲವೂ ಬದಲಾಯ್ತು. ತನ್ನನ್ನು ಮಿಥುನ್ ಚಕ್ರವರ್ತಿ ಎಂದು ಕರೆಸಿಕೊಳ್ಳಲು ತಿಣುಕಾಡಿದ. ಗೂಡ್ಸ್ ಗಾಡಿಯೊಂದನ್ನು ಏರಿ ಮುಂಬೈಗೆ ಹೊರಟೇ ಬಿಟ್ಟ…

ನೇಪಥ್ಯದಲ್ಲಿ:
ಸಂಗೀತ : ಪ್ರಶಾಂತ್‍ ಹಿರೇಮಠ್
ಬೆಳಕು : ಮಹೇಶ್‍ ಕಲ್ಲತ್ತಿ
ವಸ್ತ್ರವಿನ್ಯಾಸ : ಶಾಲ್ಮಲಿ ಹಿರೇಮಠ
ಪ್ರಚಾರ : ಶ್ರೀಕಂಠ ಗುಂಡಪ್ಪ, ವೆಂಕಟನಾಗ್ ಸೋಬರ್ಸ್
ಪ್ರಸಾದನ : ಗೀತಾ/ ಮಹೇಶ್
ರಂಗಸಜ್ಜಿಕೆ : ನಿತಿನ್ ಕೊಡಿಯಾಲ್‍ಬೈಲ್, ರಂಗ
ಪರಿಕರ : ಮಂಜು, ಅಭಿರಾಮ್, ಸಿಂಧೂರ್‍ ಭಟ್, ವಿನಯ್‍ ಕಶ್ಯಪ್
ನಿರ್ಮಾಣ ನಿರ್ವಹಣೆ : ರಾಜೇಶ್‍ ಬಿ.

ಪಾತ್ರವರ್ಗ:
ಮಾ. ಸುಖದೇವ್, ಮಂಜು ಮಂಗಲ, ನಿಧಿ ಅಕ್ಷಯ, ಗೀತಾ, ವಿನಯ್‍ ಕಶ್ಯಪ್, ಪ್ರಯಾಗ್, ಅಭಿರಾಮ್, ಸಿಂಧೂರ್ ಭಟ್, ದಿವ್ಯಾ, ಶಾಲಿನಿ, ಧನ್ಯಶ್ರೀ, ರೋಶ್ನಿ, ಅಜಿತ್‍ ನಾಯಕ್, ಕಾರ್ತಿಕ್, ಗಿರೀಶ್, ಪ್ರತಾಪ್, ಕು. ಅನಘಾ, ಮಾ. ಸರಹ

ಮೊದಲ ಪ್ರದರ್ಶನ: 27.05.2015   ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.

Play Synopsis:
If someone tells a young boy, “You look like a hero,” his eyes immediately light up, he checks himself in the mirror repeatedly, and starts imitating his favourite actor. He even begins to act out his favourite actress’s moves as if she’s right there with him.

This is exactly what happened to our protagonist, Chandu. One day, after someone saw him with a bandage on his forehead, they remarked that he looked like Mithun Chakraborty. From that moment, a hero was born within Chandu. He changed his hairstyle, clothes, and walk to resemble Mithun Chakraborty. Obsessed with being called by that name, he even hitched a ride on a goods train headed to Mumbai.

Backstage:
Music : Prashanth Hiremath
Lights : Mahesh Kallathi
Costumes : Shalmali Hiremath
Publicity : Srikanta Gundappa/ Vengkatnag Sobers
MakeUp : Geetha/ Mahesh
Stage Design : Nithin Kodialbail/ Ranga
Props : Manju, Abhiram, Sindhoor Bhat, Vinay Kashyap
Production : Rajesh B.