ಬ್ಲೈಂಡ್ ಶಾಟ್ (2020)
ರಚನೆ : ಫ್ರೆಡರಿಕ್ ನಾಟ್ | ಕನ್ನಡ ರೂಪಾಂತರ: ಬಿ.ಪಿ. ಅರುಣ್
ಪರಿಕಲ್ಪನೆ, ನಿರ್ದೇಶನ: ವಿಶ್ವಾಸ್ ಕೃಷ್ಣ
Blind Shot (2020)
Playwright : Freerick Knott | Kannada Adaption: B.P. Arun
Directed by: Vishwas Krishna
ನಾಟಕದ ಕಥಾವಸ್ತು
ಬ್ಲೈಂಡ್ ಶಾಟ್ ಒಂದು ಥ್ರಿಲ್ಲರ್. ಇದು ಫ್ರೆಡರಿಕ್ ನಾಟ್ ಇಂಗ್ಲೀಷಲ್ಲಿ ಬರೆದಿರುವ “ವೆಯ್ಟ್ ಅಂಟಿಲ್ ಡಾರ್ಕ್” ನಾಟಕದ ಕನ್ನಡ ಅವತರಣಿಕೆ. ಮುಖ್ಯ ಪಾತ್ರವಾದ ಕುರುಡು ಗೃಹಿಣಿ ಅನೂಪಳ ಸುತ್ತ ತಿರುಗುತ್ತದೆ. ಡ್ರಗ್ಸ್ ತುಂಬಿಕೊಂಡ ಒಂದು ಮ್ಯೂಸಿಕಲ್ ಡಾಲ್ ಕಾರಣಾಂತರಗಳಿಂದ ಅರವಿಂದ ಹೆಗಡೆ – ಅನೂಪ ದಂಪತಿ ಮನೆಯನ್ನು ಸೇರುತ್ತದೆ. ಡಾಲ್ ಅನ್ನು ಕಳವು ಮಾಡಲು ಬಂದಿದ್ದ ಮಾಲಾ ಅಲ್ಲೇ ಕೊಲೆಯಾಗುತ್ತಾಳೆ. ಗೊಂಬೆ ಕಳೆದುಹೋಗುತ್ತದೆ. ಅರವಿಂದ ಮನೆಯಲ್ಲಿ ಇಲ್ಲದಿರುವಾಗ ಅನೂಪಳಿಂದ ಉಪಾಯವಾಗಿ ಆ ಡಾಲ್ ಅನ್ನು ಹುಡುಕಿಸಿ ತೆಗೆದುಕೊಳ್ಳಲು ಮೂವರು ಕಳ್ಳರು ಪಿತೂರಿ ನಡೆಸುತ್ತಾರೆ. ಒಂದು ಸಣ್ಣ ಮೋಸದ ನಾಟಕವು ಅನಿವಾರ್ಯ ಕಾರಣಗಳಿಂದ ವಿಕೋಪಕ್ಕೆ ಹೋಗಿ ಅನೂಪಳ ಜೀವಕ್ಕೆ ಅಪಾಯ ಒದಗುವ ಹಂತ ತಲುಪುತ್ತದೆ. ಆ ಮೂವರ ಮೋಸದಾಟವು ಅನೂಪಳ ಅರಿವಿಗೆ ಬಂದ ಕ್ಷಣದಿಂದ ಅವಳ ಹಾಗೂ ಆ ಕಳ್ಳರ ನಡುವಿನ ಬೆಕ್ಕು-ಇಲಿ ಆಟ ಆರಂಭವಾಗುತ್ತದೆ. ತನ್ನ ಮನೆಯಲ್ಲಿ ಒಂಟಿಯಾಗಿಯೇ ಕಳ್ಳರ ಕೈಗೆ ಸಿಕ್ಕಿಹಾಕಿಕೊಳ್ಳುವ ಅನೂಪ, ತನ್ನ ದೃಷ್ಟಿಹೀನತೆಯನ್ನು ಮೀರಿ ಅವರ ಮೋಸದಾಟಕ್ಕೆ ಪ್ರತ್ಯುತ್ತರ ನೀಡುವುದು ಅವಳ ಉಳಿವಿಗೆ ಅನಿವಾರ್ಯವಾಗುತ್ತದೆ.
ಪಾತ್ರವರ್ಗ:
ಅರ್ಪಿತಾ ಥೇಲ್ಕರ್, ಧನ್ಯಶ್ರೀ, ನೇಸರ, ರಾಘವೇಂದ್ರ ಬೂದನೂರ್, ಮುರಳಿ ಜಿ., ಮಂಜುನಾಥಶಾಸ್ತ್ರಿ, ಪ್ರಯಾಗ್ ಕೋರೆ, ಹರಿಪ್ರಸಾದ್ ಕಶ್ಯಪ್, ವಿನಯ್ ಕೃಷ್ಣ, ಮಂಜು ಮಂಗಲ, ಮಂಜು ಆರ್, ಮಂಜು ವಿ.ಎಸ್. ನರಸಾಪುರ.
ನೇಪಥ್ಯದಲ್ಲಿ:
ವಿನ್ಯಾಸ: ಹೆಚ್.ಕೆ.ದ್ವಾರಕಾನಾಥ್
ಸಂಗೀತ: ಪ್ರಶಾಂತ್ ಹಿರೇಮಠ
ವಸ್ತ್ರವಿನ್ಯಾಸ: ನಂದಿನಿ ಕೆ.ಆರ್.
ಬೆಳಕು: ಕೃಷ್ಣಕುಮಾರ ನಾರ್ಣಕಜೆ
ಪ್ರಸಾದನ: ರಾಘವೇಂದ್ರ ಬೂದನೂರ್, ಸರಿತಾ ಸಿ.ವಿ.
ನಿರ್ಮಾಣ ನಿರ್ವಹಣೆ: ಬಿ. ರಾಜೇಶ್
ಮೊದಲ ಪ್ರದರ್ಶನ: 23.02.2020 ಸ್ಥಳ: ಕಿರುರಂಗಮಂದಿರ, ಕಲಾಮಂದಿರ, ಮೈಸೂರು.
Play Synopsis
“Wait Until Dark” is a suspense thriller play by Frederick Knott. The story centers around Susy Hendrix, a blind woman who becomes the target of three con men searching for a doll filled with heroin hidden in her apartment. Unaware of the doll’s significance, Susy must rely on her wits and the help of a young neighbor to outsmart the criminals in a tense game of cat and mouse. The play builds to a dramatic climax where darkness becomes Susy’s greatest advantage.
Backstage:
Design: H.K. Dwarakanath
Music: Prashanth Hiremath
Costume: Nandini K.R.
Lights: Krishna Kumar Narnakaje
MakeUp: Raghavendra Boodnoor, Saritha C.V.
Production in charge: Rajesh B.
First Performance: 23.02.2020 Venue: Kiru Rangamandira, Kalamandira, Mysuru.