ಅನೀಶ್-ಶೀಲಾ (2011)

ರಚನೆ : ಆರ್ಯ ಆಚಾರ್ಯ
ನಿರ್ದೇಶನ : ಪ್ರಭುಸ್ವಾಮಿ ಮಳಿಮಠ
ನಾಟಕದ ಅವಧಿ: 40 ನಿಮಿಷಗಳು

Aneesh – Sheela (2011)

Playwright: Arya Acharya
Direction: Prabhuswamy Malimath
Duration : 40 Minutes

ನಾಟಕ ಕುರಿತು:
ಸಂವೇದನೆಯ ಕೊರತೆಯು ಆಧುನಿಕ ಯುಗದ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಬಹುಮುಖ್ಯ ಸಂಗತಿ. ಇದರಿಂದ ಬದುಕಿನ ಸಾಮರಸ್ಯದ ಅಂತರ ಮತ್ತಷ್ಟು ಹೆಚ್ಚಾಗುತ್ತಿರುವುದು ಆತಂಕದ ವಿಚಾರ. ಮನುಷ್ಯ-ಮನುಷ್ಯನ ನಡುವೆ ಕ್ಷೀಣಿಸುತ್ತಿರುವ ಅಂತಃಕರಣದ ಜಂಜಾಟದ ನಡುವೆ ‘ಅನೀಶ್‍-ಶೀಲ’ ನಾಟಕ ಆಶಾಕಿರಣದಂತೆ ಸಣ್ಣ ಬೆಳಕಾಗಿ ಹೊತ್ತಿಕೊಳ್ಳುತ್ತದೆ. ಈ ನಾಟಕದ ಮೂಲ ಉದ್ದೇಶವಿರುವುದೇ ಮನುಷ್ಯರಲ್ಲಿನ ಭಾವದ ಕೊರತೆಯ ಬಗ್ಗೆ. ಕೌಟುಂಬಿಕ ಸಂಬಂಧದ ನಡುವೆ ಸಣ್ಣ ಕಿಡಿಯಂತೆ ಹೊತ್ತಿಕೊಳ್ಳುವ ಅಸಹನೀಯತೆ ಬೆಂಕಿಯ ಹಾಗೆ ಯಾವ ರೀತಿಯಲ್ಲಿ ಮನೆಯನ್ನೇ ಅಪೋಷನ ತೆಗೆದುಕೊಳ್ಳುತ್ತದೆ ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತಾ ಮನಸ್ಸಿನ ಆಳಕ್ಕೆ ಇಳಿಯತೊಡಗುತ್ತದೆ. ಬದುಕಿನ ರಥಧ ಗಾಲಿಗಳಲ್ಲಿ ಸಮಾನತೆ ಎಂಬುದು ಕಳೆದುಹೋದರೆ ಹಳಿತಪ್ಪಿದ ಬದುಕು ಗುರಿಮುಟ್ಟುವ ಬಗೆ ಹೇಗೆ? ನಮ್ಮೆಲ್ಲರ ಬದುಕಿನ ಹೊಂದಾಣಿಕೆಯ ಭದ್ರ ಬುನಾದಿ ಸಡಿಲಗೊಳ್ಳುತ್ತಾ ಹೋದರೆ ಜೀವನದ ಮಾಧುರ್ಯ ಅರಳುವುದಾದರೂ ಹೇಗೆ? ಅನೀಶ್‍-ಶೀಲ ನಾಟಕ ಇಂತಹ ಹತ್ತು ಹಲವು ಜಟಿಲ ಪ್ರಶ್ನೆಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡು ಆಧುನಿಕ ಮನುಷ್ಯರ ಜಂಜಾಟಗಳನ್ನು ಬಹಿರಂಗಗೊಳಿಸುತ್ತದೆ.

ನೇಪಥ್ಯದಲ್ಲಿ
ವಸ್ತ್ರವಿನ್ಯಾಸ : ನಂದಿನಿ ಕೆ.ಆರ್. | ರಂಗವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ ಸಹಾಯ: ವಿನಯ್ ಕಾವಾ, ನಿತಿನ್ ಕೊಡಿಯಾಲಬೈಲ್ । ಬೆಳಕು : ಕೃಷ್ಣಕುಮಾರ ನಾರ್ಣಕಜೆ | ಪ್ರಸಾದನ : ಸಂತೋಷ್‌ಕುಮಾರ ಕುಸನೂರ್, ಸುಷ್ಮಾ ನಾಣಯ್ಯ, ರೂಪಾ ವಶಿಷ್ಠ । ಸಂಗೀತ : ಪ್ರಶಾಂತ್ ಹಿರೇಮಠ್ | ರಂಗನಿರ್ವಹಣೆ : ರಾಜೇಶ್ ಬಿ.

ಪಾತ್ರವರ್ಗ:
ಸುಷ್ಮಾ ನಾಣಯ್ಯ, ವಿಶ್ವಾಸ್‌ಕೃಷ್ಣ, ಹನೀಫ್ ಮೊಹಮ್ಮದ್, ಮಂಜುನಾಥಶಾಸ್ತ್ರಿ.

ನೇಪಥ್ಯದಲ್ಲಿ:
ಸುಧೀರ್‌ಕುಮಾರ್, ಶಿವಮೂರ್ತಿ, ಮುರಳಿ ಗುಂಡಣ್ಣ, ಹಬೀಬುಲ್ಲಾ, ಇಸ್ಲಾಹುದ್ದೀನ್, ಅಶ್ವಿನ್, ನವೀನ್ ನೇತಾಜಿ, ಜನಾರ್ದನ (ರಂಗಾಯಣ), ಕೃಷ್ಣಪ್ರಸಾದ್, ಮೋಹನ್ ರಂಗಾಯಣ.

ಮೊದಲ ಪ್ರದರ್ಶನ: 18.03.2011 ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.

About the Play
The lack of empathy is a significant issue deeply rooted in modern life. This has widened the gap in the harmony of life, which is a cause for concern. Amid the growing emotional disconnect between people, the play “Aneesh-Sheela” shines as a small ray of hope. The primary purpose of this play is to address the emotional deficiency in humans. It poignantly conveys how the intolerance that arises like a small spark within family relationships can grow into a fire that consumes the entire household. It delves deep into the mind, illustrating how a life derails when the balance of equality is lost in the wheels of life’s chariot. If the stable foundation of harmony in our lives begins to weaken, how can the sweetness of life flourish? The play “Aneesh-Sheela” carries within it many such complex questions, revealing the struggles of modern human life.

Backstage:
Costumes: Nandini K.R. | Stage Design: H.K. Dwarakanath, Assitance: Vinay CAVA, Nithin Kodialbail | Lights: Krishnakumar Narnakaje | MakeUp: Santhosh Kumar Kusanoor | Music: Prashanth Hiremath | Stage Management : Rajesh B.

On Stage:
Sushma Nanaiah, Vishwas Krishna, Haneef Mohammed, Manjunatha Shasthri.
First Performance : 18.03.2011 Venue: Sriranga Auditorium, Rangayana, Mysuru.