ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ

ಈ ಊರಿನಲ್ಲಿ ಕಳ್ಳರೇ ಇಲ್ಲ (2013)

ಪರಿಕಲ್ಪನೆ, ವಿನ್ಯಾಸ, ನಿರ್ದೇಶನ: ಹೆಚ್.ಕೆ.ದ್ವಾರಕಾನಾಥ್
ನಾಟಕದ ಅವಧಿ : 2 ತಾಸು

Gabriel Garcia Marquez’s

Ee Ooralli Kallare Illa (2013)

(There are no thieves in this town)
Design & Direction : H.K. Dwarakanath
Duration : 2 Hours

ನಾಟಕ ಕುರಿತು
ಕಳವು ಅಂದರೆ ಕಳ್ಳತನ. ಇದು ಮುನ್ನಡೆಯುತ್ತಿರುವ ಈ ಇಪ್ಪತ್ತೊಂದನೇ ಶತಮಾನದಲ್ಲಿ ಮನುಷ್ಯರ ಅಸ್ತಿತ್ವವನ್ನೇ ಕೆಣಕಿದೆ. ಕಂಗೆಡಿಸಿದೆ. ಹಾಗೆ ನೋಡಿದರೆ ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಈ ಮೂರು ಸಂಗತಿಗಳು ಈ ಕಾಲದ ಜನ ಜೀವನದಲ್ಲಿ ಬೆರೆತು, ಇವುಗಳಿಗಾಗಿಯೇ ಜಗತ್ತಿನ ಎಲ್ಲೆಡೆ ಹೋರಾಟ ನಡೆಯುತ್ತಿದೆ. ಈ ಹೊತ್ತಿನಲ್ಲಿ ಇದರ ಹೊಟ್ಟೆಯಿಂದಲೇ ಹುಟ್ಟಿ ಬಂದಿರುವುದು ಈ ಕಳವು. ಜಗತ್ತಿನಾದ್ಯಂತ ಅನೇಕ ಕೃತಿಗಳು ಬೆಳಕಿಗೆ ಬಂದದ್ದು; ಕತ್ತಲಿನಲ್ಲಿ ಕಳೆದು ಹೋಗಿರುವ, ಅಂತೆಯೇ ತೋರುವ ಕಳವಿನ ಕುರಿತು ಬರೆದ ಆನಂತರವೇ ಯಾವುದು ಕಳವು? ಕಳವು, ಹಾಗೆಂದರೇನು, ಕಳವಿಗೆ ಕಾರಣ ಏನು? ಕಳವಿನಿಂದಾಗುವ ಪರಿಣಾಮ ಏನು? ಈ ಪ್ರಶ್ನೆಗಳನ್ನು ಎತ್ತಿಕೊಂಡಿರುವ ಕೃತಿಗಳು ಉಂಟು. ಮುಖ್ಯವಾಗಿ ಇವು ಕಾನೂನಿನ ಕಣ್ಣಿನಲ್ಲಿ ನಾವು ಹಾಕಿಕೊಂಡಿರುವ ‘ಸತ್ಯ’ದ ಬಾಗಿಲುಗಳನ್ನು ಮೀಟಿದವು. ಸತ್ಯದ ಬಗೆಗೆ ನಮ್ಮ ನಂಭಿಕೆಯನ್ನು ಅಲುಗಾಡಿಸಿದವು. ಇಲ್ಲಿ ಪ್ರೇಮಚಂದರ ‘ಕಫನ್’, ಬೇಂದ್ರೆಯವರ ‘ಸಾಯೋ ಆಟ’, ಲಂಕೇಶರ ‘ರೊಟ್ಟಿ’, ದೇವನೂರರ ‘ಕುಸುಮಬಾಲೆ’, ಅಮರೇಶ ನುಗಡೋಣಿಯವರ ‘ದಿಲ್ ಮಾಂಗೇ ಮೋರ್’ ಈ ಮೊದಲಾದ ಕೃತಿಗಳನ್ನು ನೋಡಬಹುದಾಗಿದೆ. ಈ ದಾರಿಯಲ್ಲಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್ ಅವರ ‘ಈ ಊರಿನಲ್ಲಿ ಕಳ್ಳರೇ ಇಲ್ಲ’ ಕಥೆ ಇದೆ. ಮೇಲ್ನೋಟಕ್ಕೆ ಕಥೆಯಂತೆ ಕಂಡರೂ ಇಲ್ಲಿನ ಆಂತರ್ಯದಲ್ಲಿರುವ ಕಥನದ ಗುಣವು ಕಳವಿನ ನಮ್ಮ ಸಿದ್ಧಗ್ರಹಿಕೆಯನ್ನು ಒರೆಗೆ ಹಚ್ಚುತ್ತದೆ. ಈ ಮೂಲಕ ನಾವು ನಮ್ಮೊಂದಿಗೆ ಮುಖಾಮುಖಿಯಾಗುವಂತೆ ಉದ್ದೇಪಿಸುತ್ತದೆ.

ಸಹ ನಿರ್ದೇಶನ : ಜೀವನ್ ಕುಮಾರ್ ಬಿ.
ವಸ್ತ್ರವಿನ್ಯಾಸ : ನಂದಿನಿ ಕೆ.ಆರ್.
ಬೆಳಕು : ಕೃಷ್ಣಕುಮಾರ ನಾರ್ಣಕಜೆ
ಪ್ರಸಾದನ : ಮಹೇಶ್‌ಕುಮಾರ್, ರಾಘವೇಂದ್ರ ಬೂದನೂರು
ಸಂಗೀತ : ಪ್ರಶಾಂತ್ ಹಿರೇಮಠ್-ವಿಶ್ವಾಸ್ ಕೃಷ್ಣ
ರಂಗನಿರ್ವಹಣೆ : ರಾಜೇಶ್ ಬಿ.

ಪಾತ್ರವರ್ಗ 1:
ದೀಪಕ್ ಕೆ. ಅಗಸ್ತ್ಯ, ಮುರಳಿ ಜಿ., ಶಿಶಿರ, ರಾಘವೇಂದ್ರ ಬೂದನೂರು, ಧನ್ಯಶ್ರೀ, ಭವ್ಯ ಎಂ.ಜೆ. ಶಿವಮೂರ್ತಿ ಎನ್. ಮೈಸೂರು ಸುಧೀರ್, ಸಿಂಧೂರ್ ವಿ. ಭಟ್, ಗೌತಮ್ ಕೆ.ವಿ., ಹರ್ಷಕುಮಾರ್ ಎಸ್., ಬಿ. ಕುಲದೀಪ್ ಎಸ್.ಕುಮಾರ್, ಮಹೇಶ್‌ಕುಮಾರ್ ಎನ್., ಮಂಜು ಎಂ., ಬಿ.ರಾಜೇಶ್, ಮಂಜುನಾಥ ಶಾಸ್ತ್ರಿ, ರವಿಪ್ರಸಾದ್.

ಪಾತ್ರವರ್ಗ 2:
ಗಿರೀಶ್, ಮುರಳಿ ಜಿ., ಗೀತಾ ಪಡುವಾರಳ್ಳಿ, ಮೇಘನಾ, ಧನ್ಯಶ್ರೀ, ಅರ್ಪಿತಾ, ತೇಜಸ್ವಿನಿ, ಶಿವಮೂರ್ತಿ ಎನ್., ಧೀರಜ್, ಜಗದೀಶ್, ಸುಹಾಸ್, ದೇವನಾಗ್, ಮಹೇಶ್‌ಕುಮಾರ್ ಎನ್., ಮಂಜು ಮಂಗಲ, ಅಭಿರಾಮ್, ಮಂಜುನಾಥಶಾಸ್ತ್ರಿ, ಶಿವು.

ಮೊದಲ ಪ್ರದರ್ಶನ: 07.03.2013   ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.

Synopsis:
“There Are No Thieves in This Town” is a short story by Gabriel García Márquez that delves into themes of guilt, justice, and the social dynamics of a small town. The story centres around Damaso, a young man who impulsively steals billiard balls from a local bar, not realizing the impact his seemingly trivial theft will have on the community.

As the town grapples with the mystery of the missing billiard balls, suspicion and paranoia spread among the residents. Damaso’s sense of guilt grows, particularly as he sees the unintended consequences of his actions on the innocent people around him, including his pregnant wife. The story explores how even a small crime can disrupt the fragile order of a community and how the fear of punishment can lead to greater moral and personal dilemmas. Ultimately, Damaso faces a choice between confessing and living with the consequences of his actions, highlighting the complexity of human nature and the idea that no crime, however small, goes unnoticed.

Co Direction : Jeevan Kumar B. 
Costumes : Nandini K.R. 
Lights : Krishnakumar Narnakaje
MakeUp : Mahesh Kumar, Raghavendra Boodnoor 
Music : Prashanth Hiremath – Vishwas Krishna
Stage Management : Rajesh B.

First Performance : 07.03.2013 Venue: Sriranga Auditorium, Rangayana, Mysuru.