ತುಘಲಕ್ (2022)
ರಚನೆ : ಗಿರೀಶ್ ಕಾರ್ನಾಡ
ಪರಿಕಲ್ಪನೆ, ನಿರ್ದೇಶನ: ಮಾಯಸಂದ್ರ ಕೃಷ್ಣಪ್ರಸಾದ್
Tughlaq (2022)
Playwright: Girish Karnad
Direction: Mayasandra Krishnaprasad
ನಾಟಕ ಕುರಿತು…
“ಕೇವಲ ಕಾಮಾತುರನಾಗಿ ಒಬ್ಬ ಹೆಣ್ಣನ್ನು ಎಳೆದಾಡಿದರೆ ಏನು ಪ್ರಯೋಜನ? ಇಲ್ಲ.. ಇಲ್ಲ.. ಮೊದಲು ಅಧಿಕಾರ ಪಡೆಯಬೇಕು. ಆಗ ಪೀಡೆ, ಕ್ರೀಡೆ ಎಲ್ಲದಕ್ಕೂ ಅರ್ಥ ಬಂದುಬಿಡುತ್ತದೆ..”
“ಧರ್ಮಕ್ಕೂ ರಾಜಕಾರಣಕ್ಕೂ ಏನು ಸಂಬಂಧ? ಜೀವನದಲ್ಲಿ ಒಮ್ಮೊಮ್ಮೆ ಹೆಡೆಯೆತ್ತುವ ಶೂನ್ಯತೆಗೆ ಭಕ್ತಿಯ ಹೊರತು ಬೇರೆ ಯಾವ ಸಂಗೀತ ಬಗ್ಗಿಸೀತು? ಅಲ್ಲಿ ಧರ್ಮವೊಂದೇ ಬೆಳಕು. ಆದರೆ ನನ್ನ ರಾಜ್ಯದಲ್ಲಿ ಲಕ್ಷಾವಧಿ ಜನರಿದ್ದಾರೆ. ಅಲ್ಲಿಯೂ ಕೊಳೆ ಇದೆ, ನಿಜ. ಆದರೆ ಮನುಷ್ಯರು ಮಾಡಿಟ್ಟ ಕೊಳೆಯನ್ನು ತೊಳೆಯಲಿಕ್ಕೆ ನಾನು ದೇವರನ್ನು ಏಕೆ ಕರೆಯಬೇಕು?”
“ಮೊಣಕಾಲ ಮೇಲೆ ಬಹಳ ದೂರ ತಲುಪುವುದು ಯಾರಿಗೂ ಸಾಧ್ಯವಿಲ್ಲ, ಶೇಖಸಾಹೇಬ. ನನಗೆ ಬೇಕಾದದ್ದು ಅಂಬೆಗಾಲಿಕ್ಕುವುದಲ್ಲ, ನಾಗಾಲೋಟ.”
ಕ್ರಿ.ಶ. 1327ರಲ್ಲಿ ದಿಲ್ಲಿಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ ಮನುಷ್ಯನ ಸಾರ್ವಕಾಲಿಕ ಅನುಭವಕ್ಕೆ ರೂಪಕವಾಗಿ ಕಾರ್ನಾಡರು ಕಟ್ಟಿಕೊಟ್ಟಿರುವ `ತುಘಲಕ್’ ನಾಟಕದಲ್ಲಿನ ಪಾತ್ರಗಳು ಆಡುವ ಮಾತುಗಳಿವು. ಈ ಮಾತುಗಳು ಐತಿಹಾಸಿಕ ಸಂದರ್ಭದಲ್ಲಿ ಮೂಡಿಬಂದಿದ್ದರೂ ಸಮಕಾಲೀನ ರಾಜಕೀಯದ ಸಂದರ್ಭಕ್ಕೆ ಕೆಲವೊಮ್ಮೆ ಹೊಂದಿಬಿಡುವ ಆಕಸ್ಮಿಕವೇ ಸಾಹಿತ್ಯದ ಸಾರ್ವಕಾಲಿಕ ಶಕ್ತಿಯಾಗಿದೆ.
ಮೊಹಮ್ಮದ್ ಬಿನ್ ತುಘಲಕ್ ಎಂಬ ಅತ್ಯಂತ ಮಹತ್ವಾಕಾಂಕ್ಷಿ ದೆಹಲಿಯ ಸುಲ್ತಾನನ ಕತೆಯನ್ನು ಈ ನಾಟಕದಲ್ಲಿ ರಂಗದ ಮೇಲೆ ಕಾಣಬಹುದು. ‘ಯಥಾ ರಾಜ ತಥಾ ಪ್ರಜಾ’ ಎಂಬ ಗಾದೆಯ ಮಾತಿದೆ. ತನ್ನ ಸಮಾನತೆ, ಸಹಬಾಳ್ವೆ ಮತ್ತು ಶಾಂತಿಯ ಆಕಾಂಕ್ಷೆಯನ್ನು ಪ್ರತಿಪಾದಿಸುತ್ತಾ, ರಾಜಕಾರಣದ ನೆಪದಲ್ಲಿ ನಿರಂಕುಶಾಧಿಕಾರಿಯಾಗಿ ಮೆರೆಯುವ ರಾಜ ಒಂದೆಡೆಯಾದರೆ, ಆ ರಾಜನ ಪ್ರಭುತ್ವದ ಬಗ್ಗೆ ಬಹಿರಂಗವಾಗಿ ಮಾತನಾಡುವ ಧೈರ್ಯವಿಲ್ಲದೆ ಗುಟ್ಟಾಗಿ ಅಸಮಾಧಾನದ ಮಾತುಗಳನ್ನಾಡುತ್ತ ಖೋಟಾ ನಾಣ್ಯಗಳನ್ನು ಟಂಕಿಸುವುದರ ಮೂಲಕ ತಮ್ಮ ಅಪ್ರಾಮಾಣಿಕತೆಯನ್ನು ಮೆರೆಯುವ ಪ್ರಜೆಗಳು ಇನ್ನೊಂದೆಡೆ. ಮನುಷ್ಯನ ದಾಹಕ್ಕೆ ಕನ್ನಡಿ ಹಿಡಿಯುತ್ತಾ, ಅದು ಅಧಿಕಾರವಿರಬಹುದು; ಹಣವಿರಬಹುದು; ಕಾಮವಿರಬಹುದು; ಏನಾದರಿರಬಹುದು, ಕೊನೆಯಲ್ಲಿ ನಾವು ಮಾಡಿದ ಪಾಪಗಳೆಲ್ಲವೂ ಅನಿವಾರ್ಯವೆಂದು ಸಾಧಿಸುವ ಮೂಲ ಗುಣವನ್ನು ತೋರಿಸುತ್ತದೆ. ತುಘಲಕ್ ನಾಟಕದ ಗೆಲುವೆಂದರೆ, ಮನಸ್ಸು ಹಾಗು ಬುದ್ಧಿಯ ನಡುವಿನ ಆಲೋಚನಾ ದ್ವಂದ್ವದಾಟದ ಸುಲ್ತಾನನ ಆಳ್ವಿಕೆಯನ್ನು ಅತ್ಯಂತ ಮಾರ್ಮಿಕವಾಗಿ ಬಿಂಬಿಸುತ್ತಲೇ, ಅವನ ನಡವಳಿಕೆಯನ್ನು ವಿಮರ್ಷೆಗೆ ಹಚ್ಚಿ, ನಿರ್ಣಯವನ್ನು ಪ್ರೇಕ್ಷಕರಿಗೆ ಬಿಡುತ್ತದೆ. ತುಘಲಕ್ ನಾಟಕ ನಿಸ್ಸಂಶಯವಾಗಿ ಗಿರೀಶ್ ಕಾರ್ನಾಡರ ಮೇರು ಕೃತಿಗಳಲ್ಲೊಂದು.
ನೇಪಥ್ಯದಲ್ಲಿ
ಬೆಳಕು: ಕೃಷ್ಣಕುಮಾರ್ ನಾರ್ಣಕಜೆ
ವಸ್ತ್ರವಿನ್ಯಾಸ: ಬಿ.ಎಂ. ರಾಮಚಂದ್ರ
ಸಂಗೀತ: ಉದಿತ್ ಹರಿತಸ್
ರಂಗಸಜ್ಜಿಕೆ ಮತ್ತು ಪರಿಕರ: ಮಂಜು ಕಾಚಕ್ಕಿ
ಸಹ ನಿರ್ದೇಶನ: ಹರಿಪ್ರಸಾದ್ ಕಶ್ಯಪ್
ನಿರ್ವಹಣೆ: ಮಂಜುನಾಥಶಾಸ್ತ್ರಿ
ರಂಗದ ಮೇಲೆ
ಮಂಜುನಾಥಶಾಸ್ತ್ರಿ, ರಾಘವೇಂದ್ರ ಬೂದನೂರು, ಹರಿಪ್ರಸಾದ್ ಕಶ್ಯಪ್, ರಶ್ಮಿ ನಾರಾಯಣ್, ಮುರಳಿ ಗುಂಡಣ್ಣ, ರವಿಪ್ರಸಾದ್, ಭಾರ್ಗವಿ ಹೊರಂಟೂರು, ವಿಜಯ್, ಪ್ರಣವ್ ಸ್ವರೂಪ್, ನವೀನ್, ಆದರ್ಶ, ಪ್ರಜ್ವಲ್, ಧನುಷ್, ರಕ್ಷಿತ್, ಗೌತಮ್ ಮತ್ತಿತರರು.
ಮೊದಲ ಪ್ರದರ್ಶನ: 2022 ಆಗಸ್ಟ್ 28 ಸ್ಥಳ: ಕಿರುರಂಗಮಂದಿರ, ಕಲಾಮಂದಿರ ಆವರಣ, ಮೈಸೂರು.
Synopsis:
Tuglaq dramatizes the story of the over ambitious ruler Mohammad-bin-Tuglaq. There is a saying ‘yatha raja tatha praja’, meaning the subjects are as good as their ruler. We see a ruler who wants to prove that his heart is in the right place and yet become defensive about his tyranny. We also parallelly see his subjects who silently complain about their ruler’s fickleness but show their worth in the huge pile of counterfeit coins dumped in the courtyard. Ruler or not, human nature of greed for wants, be it power; be it money; be it lust; be it whatever, dominates in the end and makes us believe that the deed was ‘inevitable’. The game of Heart vs Mind; The beauty of the play Tuglaq is in realizing this dilemma and presenting an ambiguous personality as is, without judging. Tuglaq can certainly be considered as playwright Girish Karnad’s Magnus Opus.
Backstage:
Lights: Krishna Kumar Narnakaje
Costumes: B.M. Ramachandra
Music: Udit Haritas
Set & Props: Manju Kachakki
Asst Director: Hariprasad Kashyap
Stage Manager: Manjunatha Shasthri
On Stage:
Manjunatha Shasthri, Raghavendra Boodnoor, Hariprasad Kashyap, Rashmi Narayan, Murali Gundanna, Raviprasad, Bhargavi Horantoor, Vijay Ningappa, Pranav Swaroop, Naveen, Adarsh, Prajwal, Dhanush, Rakshith, Gowtham.
First Performance: 2022 August 28 Venue: Kirurangamandir, Kalamandir, Mysuru.