ಪೊಲೀಸರಿದ್ದಾರೆ ಎಚ್ಚರಿಕೆ (2011)
ನಿರ್ದೇಶನ: ರಾಜೇಶ್ ಬಿ.
ನಾಟಕದ ಅವಧಿ: 1 ಗಂಟೆ 30 ನಿಮಿಷಗಳು
Polisariddare Eccharike (2011)
Direction: Rajesh B.
Duration : 1 Hour 30 Minutes
ನಾಟಕ ಕುರಿತು:
ಲಂಕೇಶರ ಈ ನಾಟಕದ ವಿಶೇಷತೆ ಜಟಿಲವಾದ ವಸ್ತುವನ್ನು ಒಳಗೊಂಡಿರುವಂತಹುದು. ಇದರ ಪರಿಕಲ್ಪನೆಯೇ ಹೊಸತನದ್ದು. ಒಂದು ಚಿಕ್ಕ ಕೋಣೆಯಲ್ಲಿ ನಡೆಯುವ ನಾಟಕವಿದು. ರುದ್ರಮೂರ್ತಿ ಒಬ್ಬ ಉತ್ತಮ ನಾಟಕಕಾರ. ಮದುವೆಯಾಗದ ಬ್ರಹ್ಮಚಾರಿ. ತಾನು ಬರೆದ ನಾಟಕಗಳನ್ನು ಪ್ರಕಟಿಸಿ, ಅದರಿಂದ ಬರುವ ಅಲ್ಪ ಸ್ವಲ್ಪ ಹಣದಿಂದ ಜೀವನ ನಡೆಸುವ ದಾರುಣ ಸ್ಥಿತಿಗೆ ತಲುಪಿರುತ್ತಾನೆ. ಆದರೆ ಈತ ಪರ್ಸೆಕ್ಯೂಷನ್ ಕಾಂಪ್ಲೆಕ್ಸ್ (Persecution Complex) ಎಂಬ ಒಂದು ರೀತಿಯ ಮನೋವೇದನೆಯ ಖಾಯಿಲೆಗೆ ಒಳಗಾಗಿರುತ್ತಾನೆ. ತನಗರಿವಿಲ್ಲದೆಯೇ ಪೊಲೀಸರು ನನ್ನನ್ನು ಹಿಡಿಯಲು ಹಿಂಬಾಲಿಸುತ್ತಿದ್ದಾರೆ ಎಂಬ ಭ್ರಮೆ ಅವನ ಮನದಾಳದಲ್ಲಿ ಬೇರೂರಿ ಕಾಡುತ್ತಿರುತ್ತದೆ. ಈ ಗುಣದಿಂದಾಗಿ ಅವನನ್ನು ಯಾರೇ ಕಂಡರೂ, ಮಾತನಾಡಿಸಿದರೂ ಅವರು ಪೊಲೀಸಿನವರು ಅಥವಾ ನನ್ನ ಬೆನ್ನು ಹತ್ತಿದ್ದಾರೆ. ನನ್ನನ್ನು ಕೊಲ್ಲಲು ಸೈನಿಕರು ಹಿಂಬಾಲಿಸುತ್ತಿದ್ದಾರೆ ಎಂಬ ಭ್ರಮೆ, ಗುಮಾನಿಯ ಭೀತಿ ಕಾಡುತ್ತಿರುತ್ತದೆ. ಈ ಗುಮಾನಿಯಿಂದ ಹೊರಬರುವುದೇ ಕಷ್ಟವಾಗುತ್ತದೆ. ತಾನಿರುವ ಕೊಠಡಿಯ ಬಾಗಿಲನ್ನು ಹಾಕಿಕೊಂಡು ಕತ್ತಲೆ ಕೋಣೆಯ ಒಂದು ಮೂಲೆಯಲ್ಲಿ ಒಬ್ಬನೇ ಕುಳಿತು ಕಾಲ ಕಳೆಯುವುದು ರೂಢಿಯಾಗುತ್ತದೆ.
ರಂಗದ ಹಿಂದೆ:
ವಸ್ತ್ರವಿನ್ಯಾಸ : ಕುಲದೀಪ್ ಬೆಳಗೋಡು | ರಂಗವಿನ್ಯಾಸ : ಮಹೇಶ್ವರ ಎನ್. | ಬೆಳಕು : ಸಗಾಯ್ ರಾಜು
ಪ್ರಸಾದನ : ಡಾ. ಪ್ರಯಾಗ್ | ಪರಿಕರ : ಶಿವಮೂರ್ತಿ | ಸಂಗೀತ : ಶ್ರೀಕಂಠಸ್ವಾಮಿ | ರಂಗನಿರ್ವಹಣೆ : ವಿಶ್ವಾಸ್ಕೃಷ್ಣ
ಪಾತ್ರವರ್ಗ:
ಮಧು, ರಾಘವೇಂದ್ರ ಬೂದನೂರು, ಮಹೇಶ್ವರ ಎನ್. ರವಿಪ್ರಸಾದ್, ಸಿದ್ದುಪ್ರಸನ್ನ
ಮೊದಲ ಪ್ರದರ್ಶನ: 28.01.2011 ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.
Play Synopsis:
The uniqueness of Lankesh’s play lies in its complex subject matter. The very concept of the play is innovative. It is a drama that unfolds within a small room. Rudramurthy is a talented playwright and an unmarried bachelor. He has reached a dire situation where he lives off the small amounts of money he earns from publishing his plays. However, he suffers from a psychological disorder known as Persecution Complex. He harbors the deep-seated delusion that the police are following him to arrest him, even though he is unaware of it.
Backstage:
Costumes : Kuldeep Belagodu | Stage Design : Maheshwara N. | Lights : Sagai Raju
MakeUp : Dr. Prayag | Props : Shivamurthy | Music : Srikanta Swamy | Stage Manager : Vishwas Krishna.
On Stage:
Madhu, Raghavendra Boodnoor, Maheshwara N., Raviprasad, Sidduprasanna
First Performance : 28.01.2011 Venue: Sriranga Auditorium, Rangayana, Mysuru.