ಮಧ್ಯರಾತ್ರಿ ತಿಗಣೆಗಳು (2011)
ರಚನೆ: ಎಸ್. ಎನ್. ಕಿತ್ತೂರ
ನಿರ್ದೇಶನ : ಪ್ರಭುಸ್ವಾಮಿ ಮಳಿಮಠ
ನಾಟಕದ ಅವಧಿ : 40 ನಿಮಿಷಗಳು
Madhyarathriya Thiganegalu
(Midnight Encounters)
Playwright: S.N. Kittur
Direction: Prabhuswamy Malimath
Duration : 40 Minutes
ನಾಟಕ ಕುರಿತು
ಇಂದಿನ ಬಿರುಸಿನ ಜೀವನ ಎಲ್ಲವನ್ನು ಅವಸರದಲ್ಲಿ ಬಂಧಿಸಿಬಿಟ್ಟಿದೆ. ನಡುನಡುವೆ ವಿಶ್ರಾಂತಿಯೂ ಬೇಕಾಗುತ್ತದೆ. ಈ ಸಂಕೋಲೆಗಳಿಂದ ಮನುಷ್ಯ ಬಿಡಿಸಿಕೊಳ್ಳಲಾಗದಿದ್ದರೆ ಅಂಗವಿಕಲನಾಗುವ ಸಾಧ್ಯತೆಯೂ ಇರುತ್ತದೆ. `ಮಧ್ಯರಾತ್ರಿಯ ತಿಗಣೆಗಳು’ ನಾಟಕವು ಮೇಲುನೋಟಕ್ಕೆ ತಮಾಷೆಯ ಘಟನೆಗಳಿಂದ ಕೂಡಿದ್ದರೂ ತನ್ನ ಉದರದೊಳಗೆ ಜೀವನದ ಅನೇಕ ಸೂಕ್ಷ್ಮ ಪ್ರಶ್ನೆಗಳನ್ನು ಇಟ್ಟುಕೊಂಡಿದೆ. ಸಮಾಜದಲ್ಲಿನ ಅನೇಕ ಸ್ತರಗಳ ಬದುಕನ್ನು ಅನಾವರಣ ಮಾಡುತ್ತಲೇ ಸ್ವಭಾವದಲ್ಲಿನ ಭಿನ್ನತೆಯನ್ನು ತನ್ನದೇ ಆದ ರೀತಿಯಲ್ಲಿ ಬೆತ್ತಲುಗೊಳಿಸುತ್ತದೆ. ಈ ಸಂಕೀರ್ಣ ಮನಸ್ಥಿತಿಯ ಜನಗಳು, ಪರಿಸರ, ಹಾಗೂ ಪರಿಸ್ಥಿತಿಗಳ ಒತ್ತಡದಲ್ಲಿ ಯಾವ ರೀತಿ ವರ್ತಿಸುತ್ತಾರೆ, ಯಾವ ರೀತಿ ತಮ್ಮನ್ನು ಗುರುತಿಸಿಕೊಳ್ಳಲು ಹವಣಿಸುತ್ತಾರೆ ಎಂಬ ಅಂಶವು ಈ ನಾಟಕದಲ್ಲಿ ಬರುತ್ತದೆ. ಇಷ್ಟೆ ಅಲ್ಲದೆ, ನಗರ ಜೀವನದ ಬದುಕಿನ ತಲ್ಲಣಗಳು, ಮಧ್ಯಮವರ್ಗದ ತ್ರಿಶಂಕು ಬದುಕು ಹಾಗೆ ಸಣ್ಣತನಗಳು, ಇವೆಲ್ಲವೂ ಈ ನಾಟಕದಲ್ಲಿ ಪಾತ್ರಗಳ ಮೂಲಕ ಅನಾವರಣಗೊಳ್ಳುತ್ತವೆ.
ನೇಪಥ್ಯದಲ್ಲಿ
ವಸ್ತ್ರವಿನ್ಯಾಸ : ನಂದಿನಿ ಕೆ.ಆರ್. | ರಂಗವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್ ಸಹಾಯ: ವಿನಯ್ ಕಾವಾ, ನಿತಿನ್ ಕೊಡಿಯಾಲಬೈಲ್ । ಬೆಳಕು : ಕೃಷ್ಣಕುಮಾರ ನಾರ್ಣಕಜೆ | ಪ್ರಸಾದನ : ಸಂತೋಷ್ಕುಮಾರ ಕುಸನೂರ್, ಸುಷ್ಮಾ ನಾಣಯ್ಯ, ರೂಪಾ ವಶಿಷ್ಠ । ಸಂಗೀತ : ಪ್ರಶಾಂತ್ ಹಿರೇಮಠ್ | ರಂಗನಿರ್ವಹಣೆ : ರಾಜೇಶ್ ಬಿ.
ಪಾತ್ರವರ್ಗ1:
ರವಿಪ್ರಸಾದ್, ಹನೀಫ್ ಮೊಹಮ್ಮದ್, ಸಿದ್ದುಪ್ರಸನ್ನ, ನಂದಿನಿ, ಹರಿಪ್ರಸಾದ್ ಕಶ್ಯಪ್, ಪ್ರದೀಪ್
ಪಾತ್ರವರ್ಗ2:
ರವಿಪ್ರಸಾದ್, ಮಂಜುನಾಥಶಾಸ್ತ್ರಿ, ಹರಿಪ್ರಸಾದ್, ರಾಘವೇಂದ್ರ ಬೂದನೂರ್, ರಮೇಶ್ ಹುಣಸೂರು/ ಮುರಳಿ ಗುಂಡಣ್ಣ, ಅನುಷಾ/ ಬಾನುಪ್ರಿಯಾ/ ಶ್ರೇಯಾ/ ಸುಷ್ಮಾ ನಾಣಯ್ಯ/ ಗೀತಾ/ ಅಂಕಿತಾ/ ಧನ್ಯಶ್ರೀ.
ಮೊದಲ ಪ್ರದರ್ಶನ: 18.03.2011 ಸ್ಥಳ: ಶ್ರೀರಂಗ, ರಂಗಾಯಣ, ಮೈಸೂರು.
About the Play
Today’s fast-paced life has trapped everything in a rush. A break is necessary in between, too. If a person cannot free themselves from these constraints, there is a possibility of becoming impaired. Though the play “Madhyarathriya Thiganegalu” (Midnight Encounters) may seem filled with humorous incidents at first glance, it carries within it many subtle questions about life. It uncovers various layers of society while revealing, in its unique way, the differences in human nature. The play explores how people with complex mindsets behave under the pressure of their environment and circumstances and how they strive to identify themselves. Additionally, it highlights the struggles of urban life, the uncertainties of the middle class, and the pettiness of life, all of which are unveiled through the characters in the play.
Backstage:
Costumes : Nandini K.R. | Stage Design : H.K. Dwarakanath, Assitance : Vinay CAVA, Nithin Kodialbail Lights : Krishnakumar Narnakaje | MakeUp : Santhosh Kumar Kusanoor | Music : Prashanth Hiremath, Stage Management : Rajesh B.
Cast 1:
Raviprasad, Haneef Mohammed, Siddu Prasanna, Nandini, Hariprasad Kashyap, Pradeep Mahadevappa.
Cast 2:
Raviprasad, Manjunatha Shasthri, Hariprasad, Raghavendra Boodnoor, Ramesh Hunsur, Murali Gundanna, Anusha, Baanupriya, Sheya, Sushma Nanaiah, Geetha, Ankitha, Dhanyashree
First Performance: 18.03.2011 Venue: Sriranga, Rangayana, Mysuru.